ಪ್ರಿಯಾ ಪುಣಿಯಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಮದ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ. == ಆರಂಭಿಕ ಜೀವನ == ಪ್ರಿಯಾ ಪುಣಿಯಾ ರವರು ಆಗಸ್ಟ್ ೦೬, ೧೯೯೬ ರಂದು ರಾಜಸ್ಥಾನದ ಜೈಪುರನಲ್ಲಿ ಜನಿಸಿದರು. ಇವರ ತಂದೆ ಇವರ ಕ್ರಿಕೆಟ್ ಜೀವನಕ್ಕೆ ಸದಾ ಸಾಥ್ ಕೊಟ್ಟಿದ್ದಾರೆ. ಭಾರತೀಯ ತಂಡಕ್ಕೆ ಆಯ್ಕೆಯಾಗಿರುವುದು ಇವರು ತಮ್ಮ ತಂದೆಗೆ ಕೊಟ್ಟಿರುವ ಕೊಡುಗೆ ಎನ್ನುತ್ತಾರೆ ಪ್ರಿಯಾ. == ವೃತ್ತಿ ಜೀವನ == === ಪ್ರಥಮ ದರ್ಜೆ ಕ್ರಿಕೆಟ್ === ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ. ಇವರು ಪ್ರಮುಖವಾಗಿ ಬ್ಯಾಟಿಂಗ ವಿಭಾಗದಲ್ಲಿ ಆಯ್ಕೆಗೊಂಡು, ಉತ್ತಮ ಪ್ರದರ್ಷನ ನೀಡಿ ಭಾರತೀಯ ಟಿ-೨೦ ಕ್ರಿಕೆಟ್ ತಂಡಕ್ಕೆ ಅಯ್ಕೆಗೊಂಡರು. ರಾಜಸ್ಥಾನ ರಾಜ್ಯ ತಂಡದಲ್ಲಿ ಮೇಲ್ ಕ್ರಮಾಂಕದ ಬ್ಯಾಟ್ಸ್‌‍ಉಮನ ಆದ ಇವರು, ಇಂಡಿಯಾ ಗ್ರೀನ್ ತಂಡವನ್ನೂ ಪ್ರತಿನಿಧಿಸಿದ್ದಾರೆ. === ಅಂತರರಾಷ್ಟ್ರೀಯ ಕ್ರಿಕೆಟ್ === ಫೆಬ್ರವರಿ ೦೬, ೨೦೧೯ರಲ್ಲಿ ನ್ಯೂ ಜೀಲ್ಯಾಂಡ್‌‍ನ ವೆಲ್ಲಿಂಗ್ಟನ್‍ನಲ್ಲಿ ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ಮೊದಲನೇ ಹಗಲು-ಇರುಲು ಟಿ-೨೦ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. == ಪಂದ್ಯಗಳು == ಟಿ-೨೦ ಕ್ರಿಕೆಟ್ : ೦೩' ಪಂದ್ಯಗಳು == ಉಲ್ಲೇಖಗಳು ==